Thursday, August 18, 2011

Krishnan Marriage Story - Kannada Movie Review


Movie Name: Krishnan Marriage Story
Release Date: 15 July 2011
Movie Rating: 3/5

Director: Nuthan Umesh
Producer: R. Vijay Kumar
Star Cast: Ajay, Nidhi Subbaiah
Music: Sreedhar V Sumbhram




Movie Review in Kannada / ಕೃಷ್ಣನ ಮ್ಯಾರೇಜ್ ಸ್ಟೋರಿ -- ಚಿತ್ರ ವಿಮರ್ಶೆ:
ಕೃಷ್ಣನ ಮ್ಯಾರೇಜ್ ಸ್ಟೋರಿ ಇತ್ತೀಚಿಗೆ ಬಂದ ಒಂದು ಒಳ್ಳೆಯ ಚಿತ್ರ. ಕುಟುಂಬ ಪರಿವಾರ ಸಮೇತರಾಗಿ ಯಾವ ಮುಜುಗರವೂ ಇಲ್ಲದೆ ಎಲ್ಲರೂ ಒಟ್ಟಿಗೆ ಕೂತು ನೋಡಿ ಸಂತೋಷ ಪಡಬಹುದು. ಇ ಚಿತ್ರ ಲವಲವಿಕೆ ಯಿಂದ ಸುಂದರವಾಗಿ ಮೂಡಿ ಬಂದಿದೆ. ಎಲ್ಲೂ ನೋಡುಗರ ಮನಸ್ಸಿಗೆ ಬೇಜಾರು ತರದೆ ನೋಡಿಸ್ಕೊಂದು ಹೋಗುತ್ತದೆ ... ನಿಧಿ ಚೆಲ್ಲು ಚೆಲ್ಲು ಹುಡುಗಾಟದ ಹುಡುಗಿಯಾಗಿ ತುಂಬ ನೈಜವಾಗಿ ಮನಸ್ಸಿಗೆ ಹಿಡಿಸುವ ಹಾಗೆ ಅಭಿನಯಿಸಿದ್ದಾರೆ. ಅಜಯ ಕೂಡ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಎಲ್ಲೂ ಕೂಡ ಇವರು ನಟನೆ ಮಾಡಿದ್ದಾರೆ ಅಂತ ಅನ್ನಿಸುವುದಿಲ್ಲ... ಅಷ್ಟು ಸಹಜ ಅಭಿನಯ. ಮೊದಲರ್ಧ ಹೋಗಿದ್ದೆ ತಿಳಿಯುವುದಿಲ್ಲ, ಅಜಯ್ ಮತ್ತು ನಿಧಿ ಗುಬ್ಬಚ್ಚಿಗಳಗಿ ಮಾತಾಡುವುದು ಸ್ವಲ್ಪ ಜಾಸ್ತಿ ಅನಿಸಿದರು .. ನಿರ್ದೇಶಕರು ಪಾತ್ರಗಳನ್ನು ಹಿಡಿದಿಡುವಲ್ಲಿ ಯಶಸ್ವಿ ಆಗಿದ್ದಾರೆ. ಎರಡನೆ ಅರ್ಧ ದಲ್ಲಿ ಚಿತ್ರ ಸ್ವಲ್ಪ ಸೆಂಟಿಮೆಂಟ್ ಕಡೆ ವಾಲಿದರು, ಇದು ಚಿತ್ರಕ್ಕೆ ಅವಶ್ಯಕತೆ ಇದೆ ಅಂತ ಅನಿಸುತ್ತದೆ.. ಎರಡು ಹಾಡು ಕೇಳಲು ಇಂಪಾಗಿವೆ... ಚಿತ್ರ ಮುಗಿದ ಮೇಲು "ನಿದ್ದೆ ಬಂದಿಲ್ಲ ನಂಗು ನಿದ್ದೆ ಬಂದಿಲ್ಲ, ನಾಳೆ ನಂದು ಮದುವೆ ಅಂತ ನಿದ್ದೆ ಬಂದಿಲ್ಲ ... " ಹಾಡು ಮನಸ್ಸಿನಲ್ಲಿ ಗುನುಗಾಡುತ್ತದೆ . ಕಥೆ ಹಳೆಯದಾದರೂ ಅದರ ನಿರೂಪಣೆಯಲ್ಲಿ ಹೊಸತನವಿದೆ. ಒಟ್ಟಿನಲ್ಲಿ ನಿರ್ದೇಶಕ ನೂತನ್ ಉಮೇಶ್ ಅವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯವಿದೆ ಅಂತ ಅನಿಸುತ್ತದೆ..

No comments:

Post a Comment